ವೈಭವದ ಕೋದಂಡರಾಮ ರಥೋತ್ಸವ
ಆನೇಕಲ್ : ಸರ್ಜಾಪುರದ ಕೋದಂಡರಾಮ ರಥೋತ್ಸವ ವೈಭವದಿಂದ ಮಂಗಳವಾರ ನಡೆಯಿತು. ಕರ್ನಾಟಕ ಮತ್ತು ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದವು. ಮಂಗಳವಾರ ಮಧ್ಯಾಹ್ನ ಅಲಂಕೃತ ರಥದಲ್ಲಿ ಕಲ್ಯಾಣ ಕೋದಂಡ ಉತ್ಸವ ಮೂರ್ತಿಯನ್ನು ಕುಳ್ಳಿರಿಸಲಾಯಿತು. ಅರ್ಚಕರು ವಿವಿಧ ಧಾರ್ಮಿಕ ಪೂಜೆಗಳನ್ನು ಸಲ್ಲಿಸಿದ ನಂತರ ಭಕ್ತರು ರಥವನ್ನು ಎಳೆದರು.
ಶೇಷವಾಹನೋತ್ಸವ, ಗಜ ವಾಹನೋತ್ಸವ, ಗಜೇಂದ್ರ ಮೋಕ್ಷೋತ್ಸವ, ಕಲ್ಯಾಣೋತ್ಸವ ಏರ್ಪಡಿಸಲಾಗಿತ್ತು. ರಥವು ಸರ್ಜಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವೀರಗಾಸೆ, ಗಾರುಡಿ ಗೊಂಬೆ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರಥೋತ್ಸವದಲ್ಲಿ ಪಾಲ್ಗೊಂಡಿತ್ತು. ಡಾ.ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಶನಿದೇವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ದಾನವೀರ ಶೂರ ಕರ್ಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಮುತ್ಯಾಲಮ್ಮ ದೇವಿ ಕರಗ ಮಹೋತ್ಸವವು ವಹ್ನಿಕುಲದವರಿಂದ ನಡೆಯಿತು. ಅನ್ನದಾಸೋಹ ಕೇಂದ್ರ ಸ್ಥಾಪಿಸಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಆರ್.ಮನೋಹರ್, ಸರ್ಜಾಪುರ ಸಿ.ಮುನಿರಾಜು, ಎಸ್.ವೈ ಅನಿಲ್ ರೆಡ್ಡಿ, ಶ್ಯಾಮಣ್ಣ ರೆಡ್ಡಿ, ಶಾಂತಕುಮಾರ್, ಗಣೇಶ್, ಟಿ.ವಿ.ಬಾಬು, ಸರ್ಜಾಪುರ ಶಂಭಯ್ಯ, ಶ್ರೀರಾಮುಲು, ಶ್ರೀನಿವಾಸ್, ಅರವಿಂದ್ ರೆಡ್ಡಿ, ನಾಗರಾಜು, ಭರತ್ ಗೌಡ, ಪ್ರಭು, ಬುಲೆಟ್ ಬಾಬು, ಗೋಪಾಲ್, ಕಲಾವತಿ ಮೂರ್ತಿ ಕುಮಾರ್, ಸತೀಶ್, ಶಿವಕುಮಾರ್ ಇದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿ ಯುವಕ ಬಲಿ.. ಚಿಕ್ಕಮಗಳೂರಲ್ಲಿ ಹೆಚ್ಚಾಯ್ತು ಕಾಯಿಲೆ..! 595 ಮಂದಿಗೆ ರಕ್ತ ಪರೀಕ್ಷೆ
ಚಿಕ್ಕಮಗಳೂರು : ಮಂಗನ ಕಾಯಿಲೆ ರಾಜ್ಯದ ಜನರಿಗೆ ಮತ್ತೆ ಆತಂಕ ತಂದೊ... ಓದನ್ನು ಮುಂದುವರಿಸಿ
ಮುಂಡಗೋಡ
ಮುಂಡಗೋಡದಲ್ಲಿ ದ್ಯಾಮವ್ವ–ಮಾರಿಕಾಂಬ ದೇವಿಯ ರಥೋತ್ಸವಕ್ಕೆ ಭಕ್ತರ ಸಾಗರ
ಮುಂಡಗೋಡ: ಮುಂಡಗೋಡ ನಗರದ ಅಧಿದೇವತೆಯಾದ ಶ್ರೀ ದ್ಯಾಮವ್ವ ದೇವಿಯ ರ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ರಾಸು ಖರೀದಿಗೆ ನೆರವು: ಬಮೂಲ್ ನಿರ್ದೇಶಕ ರಮೇಶ್
ಆನೇಕಲ್ : ಆನೇಕಲ್ ಪಟ್ಟಣದ ಬಮೂಲ್ ಶಿಬಿರ ಕಚೇರಿಯಲ್ಲಿ ಕರ್ನಾಟಕ... ಓದನ್ನು ಮುಂದುವರಿಸಿ
ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಗಮನಕ್ಕೆ ತನ್ನಿ - ಜಿಲ್ಲಾಧಿಕಾರಿ ಜಗದೀಶ.ಜಿ
ಬೆಂಗಳೂರು : ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಶಿಕ್ಷಕ... ಓದನ್ನು ಮುಂದುವರಿಸಿ
ಟ್ಯೂಷನ್ ಗೆ ಹೋಗು ಎಂದಿದ್ದೇ ತಪ್ಪಾಯ್ತಾ - ಮನೆ ಬಿಟ್ಟು ಉಚಿತ ಬಸ್ ಹಿಡಿದ ಪುಟಾಣಿಗಳು!
ಬೆಂಗಳೂರು: 13 ಮತ್ತು 9 ವರ್ಷದ ಅಕ್ಕ ತಮ್ಮ ಜೋಡಿ ನಾಪತ್ತೆಯಾಗಿದ್... ಓದನ್ನು ಮುಂದುವರಿಸಿ
ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ 'ಲೈಂಗಿಕ ಕಿರುಕುಳ' : ಖಾಸಗಿ ಶಾಲಾ ಶಿಕ್ಷಕನ ವಿರುದ್ಧ 'ಪೋಸ್ಕೊ' ಕೇಸ್ ದಾಖಲು!
ಚಿತ್ರದುರ್ಗ : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ... ಓದನ್ನು ಮುಂದುವರಿಸಿ
ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ
ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿ... ಓದನ್ನು ಮುಂದುವರಿಸಿ
ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು
ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ : ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ
ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ